ಈಶವಾಸ್ಯ ಉಪನಿಷತ್

ಈಶವಾಸ್ಯ ಉಪನಿಷತ್

ಪಶ್ಚಿಮ ವಿದ್ಯಾಭ್ಯಾಸದ ಪದ್ಧತಿಯನ್ನು ಅನುಸರಿಸಿ ಕಾನ್ವೆಂಟ್ ಶಿಕ್ಷಣವನ್ನು ಪಡೆದು ವಿದ್ಯಾಭ್ಯಾಸವನ್ನು ಕೇವಲ ಹಣ, ಹೆಸರು ಹಾಗೂ ಕೀರ್ತಿ ಸಂಪಾದನೆ ಮಾಡುವ ಕೌಶಲ್ಯವಾಗಿ  ಅಳವಡಿಸಿಕೊಂಡು ಪದವಿಗಳುಸ್ನಾತಕೋತ್ತರ ಪದವಿಗಳು,  ಡಾಕ್ಟರೇಟ್ಗಳನ್ನು ಸಂಪಾದಿಸಿ ಉತ್ತಮ ಶ್ರೇಣಿಯ ಉದ್ಯೋಗ ಸಂಪಾದಿಸಿದರು ಮನಸ್ಸಿಗೆ ಏನೋ ಒಂದು ಬಗೆಯ ಸಂಕಟ ಅತೃಪ್ತಿ ತಪ್ಪಿದ್ದಲ್ಲ.

  ಆಂತರಿಕ ತೊಳಲಾಟಕ್ಕೆ ಶುಶ್ರುಷೆ ಮಾಡಲು ಹಲವು ಸೆಲ್ಫ್ ಹೆಲ್ಪ್ ಪುಸ್ತಕಗಳು ,ಜರ್ನಲಿಂಗ್ ಕ್ರಿಯೆಗಳು ,ಹಲವು ದಿನಚರಿ ಬದಲಾವಣೆಗಳನ್ನು ತಂದರು ಗೊಂದಲದಿಂದ ಮುಕ್ತಿ ಇಲ್ಲ.

 ಏಕೆಂದರೆ ಆತ್ಮ ಬಯಸುವುದು ಪರಾವಿದ್ಯೆ ಆಧ್ಯಾತ್ಮ ಜ್ಞಾನ ,ಕೇವಲ ಲೌಕಿಕ ಶಿಕ್ಷಣ ಆತ್ಮವನ್ನು ಸಂತಹಿಸಲಾಗದು ,ಈ ಪರಾ ವಿದ್ಯೆಯ ಸಂಪತ್ತು ಒಂದು ಸಂಪನ್ಮೂಲವಾಗಿ ನಮಗೆ ದೊರಕುವುದು ಉಪನಿಷತ್ತುಗಳಲ್ಲಿ ಆದರೆ ಪಾಶ್ಚಾತ್ಯ ವಿದ್ಯೆ ಹಾಗೂ ಸಂಸ್ಕೃತಿಗೆ ತೊಡಗಿಸಿಕೊಂಡಿರುವ ನಾವು ಉಪನಿಷತ್ತುಗಳನ್ನು ಒಪ್ಪುವ ಹಾಗೂ ಓದುವ ಮನಸ್ಥಿತಿಯಿಂದ ದೂರವಾಗಿರುವುದು ವಿಷಾದನೀಯ ವಿಷಯ. ಒಂದು ವೇಳೆ ಮನಸು ಮಾಡಿ ಓದ ಹೊರಟರೆ ಅವು ದೊರಕುವುದು ಸಂಸ್ಕೃತದಲ್ಲಿ ಕೆಲವರಿಗೆ ಓದಲು ಬಾರದು ಇನ್ನು ಕೆಲವರಿಗೆ ಓದಲು ಬಂದರು ಅರ್ಥವಾಗದು ಇಂತಹ ಸಂದರ್ಭಕ್ಕೆ ನಮಗೆ ಪ್ರಾಣದ್ರವ್ಯವಾಗಿ ಒದಗಿ ಬಂದದ್ದು ಡಾ.ಗುರುರಾಜ್ ಕರಜಗಿ ಯವರ ಈಶಾವಾಸ್ಯ ಉಪನಿಷತ್ ಪುಸ್ತಕ ಇದು ಕಲಕಿದ ಚಿತ್ತವನ್ನು ತಿಳಿಗೊಳಿಸಿ ದಿವ್ಯಾನುಭೂತಿಯನ್ನು ಒದಗಿಸುವುದರ ಜೊತೆಗೆ ಜ್ಞಾನದ ಕಣ್ಣನ್ನು ಆತ್ಮದಡೆಗೆ ಹೊರಳಿಸಿ ಅರಳಿಸುತ್ತದೆ .

ಪುಸ್ತಕದ ಮತ್ತೊಂದು ವಿಶೇಷತೆ ಎಂದರೆ,

ಡಾ.ಶ್ರೀ ಶ್ರೀ ಶ್ರೀ ನಿರ್ಮಲಾ ನಂದನಾಥ ಮಹಾ ಸ್ವಾಮೀಜಿ ರವರ ಆಶೀರ್ವಚನ/ ಮುನ್ನುಡಿ ಆಧ್ಯಾತ್ಮವೆಂದರೆ ಗೊಡ್ಡು ಪುರಾಣವೆಂದು ಮೂಗು ಮುರಿಯುವ ಯುವ ಪೀಳಿಗೆಗೆ ಆಧುನಿಕ ಬೌತಶಾಸ್ತ್ರದ ಆವಿಷ್ಕಾರಗಳ ಉದಾಹರಣೆ ಜೊತೆಗೆ ಉಪನಿಷತ್ತಿನ ಸಾರವನ್ನು ಉಣಬಡಿಸಿದ್ದಾರೆ ಶ್ರೀಗಳ ಮುನ್ನುಡಿ ವಿಜ್ಞಾನದ ವಿದ್ಯಾರ್ಥಿಗಳನ್ನು ಉಪನಿಷತ್ತಿನ ಕಡೆ ನೋಡುವಂತೆ  ಪ್ರೇರೇಪಿಸುತ್ತದೆ.

ಈಶಾವಾಸ್ಯ ಉಪನಿಷತ್ ನಮ್ಮನ್ನು ಪ್ರಾಣಿ ಪ್ರಪಂಚದಿಂದ ಪ್ರಜ್ಞಾವಂತ ಪ್ರಪಂಚಕ್ಕೆ ಕೊಂಡೊಯ್ಯುವ ದಿವ್ಯ ಗ್ರಂಥ.