
ನಿತ್ಯೋತ್ಸವ ಕವಿ ಕೆ.ಎಸ್ ನಿಸಾರ್ ಅಹಮದ್
ಇಹಲೋಕ ತ್ಯಜಿಸಿದ ನಿತ್ಯೋತ್ಸವದ ಕವಿ ಡಾ.ಕೆ.ಎಸ್.ನಿಸಾರ್ ಅಹಮದ್
ಯಾವ ಪಂಥ-ಪಂಗಡಕ್ಕೆ ಜೋತುಬೀಳದೇ ಸ್ಚಚ್ಛಂದವಾಗಿ ಹಕ್ಕಿಯಂತೆ ಕಾವ್ಯಕಟ್ಟುತ್ತಾ ಸರ್ವಜನರ ಪ್ರಿಯರಾಗಿದ್ದ ನಮ್ಮ ನಿಸಾರ್ ಅಹ್ಮದ್ ಅವರ ಕಾಯ ಅಳಿದರೂ ಅವರ ಕಾವ್ಯದ ಮೂಲಕ ನಮ್ಮ ನೆನಪಲ್ಲಿ ಆ ಜೋಗದ ಸಿರಿಯ ಬೆಳಕಿನಷ್ಟೇ ಸದಾ ಜೀವಂತ.
ಅವರ ಆತ್ಮಕ್ಕೆ ಚಿರ ಶಾಂತಿ ದೊರಕಲಿ...
ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ,
ಜಲವೆಂದರೆ ಕೇವಲ ನೀರಲ್ಲ ಅದು ಪಾವನ ತೀರ್ಥ;
ಕನ್ನಡವಲ್ಲ ತಿಂಗಳು ನಡೆಸುವ ಗುಲ್ಲಿನ ಕಾಮನಬಿಲ್ಲು,
ರವಿ ಶಶಿ ತಾರೆಯ ನಿತ್ಯೋತ್ಸವವದು ಸರಸತಿ ವೀಣೆಯ ಸೊಲ್ಲು.